ಲೋಕಸಭಾ ಎಲೆಕ್ಷೆನ್: ಮಂಡ್ಯ ಜೆಡಿಎಸ್ ಟಿಕೆಟ್ ಇನ್ನೂ ಸಸ್ಪೆನ್ಸ್...!ಮಂಡ್ಯ ಕ್ಷೇತ್ರ ಜೆಡಿಎಸ್ಗೆ ಸಿಗುವ ಬಗ್ಗೆ ಆರಂಭದಲ್ಲಿ ಅನುಮಾನವಿತ್ತು. ಈಗ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಆದರೆ, ಜಿಲ್ಲಾ ನಾಯಕರ ಆಹ್ವಾನದ ಮೇರೆಗೆ ಮಂಡ್ಯದಿಂದ ಕಣಕ್ಕಿಳಿಯಲು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಸಕ್ತಿ ತೋರಿಸಿಲ್ಲ. ಇನ್ನು ಮಂಡ್ಯ ಅಖಾಡ ಪ್ರವೇಶಿಸುವ ಕುರಿತಂತೆ ಎಚ್.ಡಿ..ಕುಮಾರಸ್ವಾಮಿ ಇನ್ನೂ ತಮ್ಮ ನಿರ್ಧಾರ ಖಚಿತಪಡಿಸಿಲ್ಲ.