ಸಿ.ಟಿ.ರವಿ ಕ್ಷಮೆ ಕೇಳಿದ್ದರೆ ಮರ್ಯಾದೆ ಉಳೀತಿತ್ತು: ಕೃಷಿ ಸಚಿವ ಚಲುವರಾಯಸ್ವಾಮಿಅಶ್ಲೀಲ ಪದ ಬಳಸಿ ನಾನು ಮಾತನಾಡಿಲ್ಲ ಅಂತಿದ್ದಾರೆ. ಯಾರೋ ಇಂತಹ ಪದ ಬಳಕೆ ಮಾಡಿದರು ಎಂದಾಕ್ಷಣ ಅದನ್ನು ರೆಕಾರ್ಡ್ ಮಾಡಿಲ್ಲದಿರಬಹುದು. ಆದರೆ, ಸದನದಲ್ಲಿದ್ದ ಎಲ್ಲಾ ಸದಸ್ಯರಿಗೂ ಮಾತನಾಡಿರುವುದು ಗೊತ್ತಿದೆ. ಆ ರೀತಿ ಮಾತನಾಡಬಾರದಿತ್ತೆಂದು ಅವರ ಪಕ್ಷದವರೇ ನನ್ನೊಂದಿಗೆ ಹೇಳಿದ್ದಾರೆ. ಹಿರಿಯ ನಾಯಕರಾಗಿ ಆ ರೀತಿಯ ಪದ ಬಳಸಿರುವುದು ಮಹಾ ಅಪರಾಧ.