ಸಾರಾಂಶ
- ಆನಂದ್ ಎಸ್.
ಟಾಟಾ ಮೋಟಾರ್ಸ್‌ನ ಸಿವಿ ಪ್ಯಾಸೆಂಜರ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್
ನಗರೀಕರಣ ಹೆಚ್ಚಾದಂತೆ ಜನರು ಈ ಹಿಂದಿಗಿಂತ ಬಸ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಡಬ್ಲ್ಯೂಆರ್‌ಐ ಇಂಡಿಯಾ 2021ರಲ್ಲಿ ಪ್ರಕಟಿಸಿದ ‘ನ್ಯಾಷನಲ್ ಇನ್ವೆಸ್ಟ್‌ಮೆಂಟ್ ಪ್ರೋಗ್ರಾಂ ಫಾರ್ ಬಸ್- ಬೇಸ್ಡ್ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ಸ್ ಇನ್ ಇಂಡಿಯಾ’ ಎಂಬ ವರದಿಯ ಪ್ರಕಾರ ಭಾರತದಲ್ಲಿ ಪ್ರತಿದಿನ 70 ಲಕ್ಷಕ್ಕೂ ಹೆಚ್ಚು ಜನರು ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಅಲ್ಲದೇ ಸರ್ಕಾರವು ರಸ್ತೆಗಳನ್ನು ಉತ್ತಮಪಡಿಸಿರುವುದರಿಂದ ದೇಶಾದ್ಯಂತ ಬಸ್ ಸಂಚಾರ ವ್ಯವಸ್ಥೆಯು ಕ್ರಾಂತಿಕಾರಕ ಬದಲಾವಣೆ ಕಂಡಿದೆ.
ಹೆದ್ದಾರಿಗಳು ವಿಶಾಲವಾಗಿದ್ದು, ರಸ್ತೆಗಳು ಅಭಿವೃದ್ಧಿ ಹೊಂದಿದ್ದು, ಬಸ್‌ಗಳು ತ್ವರಿತವಾಗಿ ಓಡಾಡುವುದು ಸಾಧ್ಯವಾಗಿದೆ. ಅಲ್ಲದೇ ಹೆದ್ದಾರಿ ಜಾಲದ ವಿಸ್ತರಣೆಯಿಂದ ಬಸ್‌ಗಳು ಸಾಗಲು ಅಸಾಧ್ಯವೆಂದು ಭಾವಿಸಲಾಗಿದ್ದದ ಪ್ರದೇಶಗಳಲ್ಲೂ ಸಹ ಈಗ ಬಸ್ ಗಳು ಕಾರ್ಯನಿರ್ವಹಿಸುತ್ತವೆ. ಇದರಿಂದ ನಗರದಲ್ಲಿ ಅಥವಾ ಎರಡು ನಗರಗಳ ನಡುವಿನ ಪ್ರಯಾಣ ಸಂದರ್ಭದಲ್ಲಿ ಸುರಕ್ಷತೆ ಪ್ರಮುಖ ಆದ್ಯತೆಯಾಗಿ ಬದಲಾಗಿದೆ.
ಹಳೆಯ ಸಾಂಪ್ರದಾಯಿಕ ಬಸ್ ಗಳು ಈಗಿನ ಸಂದರ್ಭಕ್ಕೆ ಅಷ್ಟಾಗಿ ಸರಿ ಹೊಂದುವುದಿಲ್ಲ. ಆಧುನಿಕ ಸಾರಿಗೆ ವ್ಯವಸ್ಥೆಯ ಬೇಡಿಕೆಗಳನ್ನು ಪೂರೈಸುವ ಮತ್ತು ಪ್ರತೀ ಪ್ರಯಾಣಿಕನಿಗೆ ಸುರಕ್ಷತೆಯನ್ನು ಒದಗಿಸುವ ಉತ್ಪನ್ನಗಳು ನಮಗೆ ಇಂದು ಬೇಕಾಗಿವೆ. ವಿಶೇಷವಾಗಿ ಇಂದು ಸ್ಮಾರ್ಟ್ ತಂತ್ರಜ್ಞಾನ ಬಂದಿದೆ. ಅದು ಚಾಲಕರು ಮತ್ತು ಪ್ರಯಾಣಿಕರಿಗೆ ಬಸ್ ಗಳಲ್ಲಿ ಉತ್ತಮ ಸುರಕ್ಷತೆಯನ್ನು ಒದಗಿಸುತ್ತಿದೆ.ಸುರಕ್ಷತೆ ಮತ್ತು ಲಭ್ಯತೆ
ಆಧುನಿಕ ಬಸ್ ಗಳು ಭಾರತೀಯ ಪ್ರಯಾಣಿಕರ ವಿವಿಧ ಅಗತ್ಯಗಳನ್ನು ಪೂರೈಸಲು ಸೂಕ್ತವಾಗಿ ವಿನ್ಯಾಸಗೊಂಡಿವೆ. ಉದಾಹರಣೆಗೆ ಕಡಿಮೆ ಎತ್ತರದ ಪ್ರವೇಶ ದ್ವಾರವು ವಯಸ್ಸಾದವರಿಗೆ ಮತ್ತು ಅಂಗವಿಕಲರಿಗೆ ಸುಲಭವಾಗಿ ಒಳಗೆ ಹೊರಗೆ ಹೋಗಲು ಸಹಾಯ ಮಾಡುತ್ತದೆ. ಬೆಂಕಿ ಎಚ್ಚರಿಕೆ, ಜಿಪಿಎಸ್ ಟ್ರ್ಯಾಕಿಂಗ್, ಸಿಸಿ ಟಿವಿ ಕಣ್ಗಾವಲು ಮತ್ತು ಎಮರ್ಜೆನ್ಸಿ ಬಟನ್ ಗಳು ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ ಒದಗಿಸುತ್ತವೆ. ಎಲೆಕ್ಟ್ರಿಕ್ ಬಸ್ ಗಳಲ್ಲಿ ಇರುವ ಸ್ಮಾರ್ಟ್ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯು ಕಾರ್ಯಾಚರಣೆಯ ತಾಪಮಾನವನ್ನು ನಿಯಂತ್ರಿಸುತ್ತದೆ ಮತ್ತು ಪ್ರಯಾಣಿಕರಿಗೆ ಅನುಕೂಲತೆ ಒದಗಿಸುತ್ತದೆ.
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇ ಎಸ್ ಸಿ) ವ್ಯವಸ್ಥೆಯು ಅಪಘಾತಗಳನ್ನು ತಡೆಗಟ್ಟಲು ನೆರವಾಗುತ್ತದೆ. ಇಬಿಎಸ್ (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇ ಎಸ್ ಪಿ) ಒಳಗೊಂಡ ಅತ್ಯಾಧುನಿಕ ಬ್ರೇಕಿಂಗ್ ವ್ಯವಸ್ಥೆಯು ತುರ್ತು ಪರಿಸ್ಥಿತಿಗಳಲ್ಲಿ ಚಾಲಕರಿಗೆ ನಿಯಂತ್ರಣ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇವೆಲ್ಲವನ್ನೂ ಸೂಕ್ತರೀತಿಯಲ್ಲಿ ನೋಡಿಕೊಳ್ಳಲು ಡಿಪೋಗಳು ವಿಶೇಷ ಸೇವಾ ಮತ್ತು ನಿರ್ವಹಣಾ ಕೇಂದ್ರಗಳಾಗಿ ಬದಲಾಗುತ್ತಿವೆ.ಸಾಮೂಹಿಕ ಜವಾಬ್ದಾರಿ
ಕೇವಲ ತಂತ್ರಜ್ಞಾನ ಮಾತ್ರದಿಂದ ಸುರಕ್ಷತೆ ಪಡೆಯಲು ಸಾಧ್ಯವಿಲ್ಲ. ಸಮಗ್ರ ವಿಧಾನದಿಂದ ಮಾತ್ರ ಸೂಕ್ತ ಸುರಕ್ಷತೆ ಹೊಂದಬಹುದಾಗಿದೆ. ಪ್ರಯಾಣಿಕರ ಸೌಲಭ್ಯದ ವೈಶಿಷ್ಟ್ಯಗಳು ಪ್ರಯಾಣದ ಸಮಯದಲ್ಲಿ ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುವ ಮೂಲಕ ಸುರಕ್ಷತೆಗೆ ಗಣನೀಯ ಕೊಡುಗೆ ನೀಡುತ್ತವೆ. ನಿಯಮಿತವಾಗಿ ವಾಹನ ನಿರ್ವಹಣೆ ಮಾಡುವುದರಿಂದ ಮತ್ತು ಸಮಗ್ರ ಚಾಲಕ ತರಬೇತಿ ಕಾರ್ಯಕ್ರಮಗಳಿಂದ ಕಾರ್ಯಾಚರಣೆಯನ್ನು ಉತ್ತಮಗೊಳಿಸಬಹುದಾಗಿದೆ. ಟಾಟಾ ಮೋಟಾರ್ಸ್ ತನ್ನ ಮ್ಯಾಗ್ನಾ, ಅಲ್ಟ್ರಾ, ಸಿಟಿರೈಡ್ ಪ್ರೈಮ್ ಮತ್ತು ಸ್ಟಾರ್ ಬಸ್ ಶ್ರೇಣಿಯ ಬಸ್‌ಗಳ ಮೂಲಕ ಈ ತತ್ವಗಳನ್ನು ಅನುಷ್ಠಾನಗೊಳಿಸಿದ್ದು, ಅಲ್ಲಿ ಸುರಕ್ಷತಾ ಫೀಚರ್ ಗಳು ಪ್ರಯಾಣಿಕರಿಗೆ ಉತ್ತಮ ಅನುಭವ ಒದಗಿಸುತ್ತವೆ.
ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ಭವಿಷ್ಯವು ಸಹಯೋಗದ ವಿಧಾನದ ಮೇಲೆ ಅವಲಂಬಿತವಾಗಿದೆ. ಸ್ಮಾರ್ಟ್ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ, ರಸ್ತೆಗಳನ್ನು ಸುಧಾರಿಸುವ ಮೂಲಕ ಮತ್ತು ಉತ್ಪಾದನಾ ಮಾನದಂಡಗಳನ್ನು ಉನ್ನತೀಕರಿಸುವ ಮೂಲಕ ಭಾರತದಲ್ಲಿ ಹೆಚ್ಚು ವಿಶ್ವಾಸಾರ್ಹ ಮತ್ತು ಸಮರ್ಥ ಸಾರಿಗೆ ವ್ಯವಸ್ಥೆಯನ್ನು ಸೃಷ್ಟಿಸಬಹುದು. ಈ ಸಾಮೂಹಿಕ ಪ್ರಯತ್ನದಿಂದ ಲಕ್ಷಾಂತರ ಜನರಿಗೆ ಸುರಕ್ಷಿತ ಪ್ರಯಾಣ ವ್ಯವಸ್ಥೆಯನ್ನು ಒದಗಿಸಬಹುದಾಗಿದೆ. ಅಲ್ಲದೇ ಈ ಮೂಲಕ ದೇಶದ ಸುಸ್ಥಿರ ಸಾರಿಗೆ ಗುರಿ ಸಾಧನೆಗೆ ಕೊಡುಗೆ ನೀಡಬಹುದಾಗಿದೆ.