ಬೆಲೆ ಹೆಚ್ಚಿದರೂ ಪಟಾಕಿ ಖರೀದಿಗೆ ಜನರ ಆಸಕ್ತಿ
Oct 22 2025, 01:03 AM ISTಪಟಾಕಿಗಳಿಂದ ಪರಿಸರ ಮಾಲಿನ್ಯ ಆಗುತ್ತದೆ ಎಂಬ ಸತ್ಯ ಗೊತ್ತಿದ್ದರೂ ಪಟಾಕಿ ಹೊಡೆಯುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಜತೆಗೆ ಪ್ರತಿ ವರ್ಷ ಪಟಾಕಿ ಬೆಲೆ ಹಚ್ಚಳವಾಗುತ್ತಿದ್ದರೂ ವ್ಯಾಮೋಹ ಮಾತ್ರ ದೂರವಾಗುತ್ತಿಲ್ಲ. ಪಟಾಕಿ ಮಳಿಗೆಗಳೆದುರು ಖರೀದಿಗೆ ಜನರ ಹೆಚ್ಚಿಗೆ ಆಗಮಿಸುತ್ತಿರುವುದು ವ್ಯಾಪಾರಸ್ಥರು ಖುಷಿಯಾಗಿದ್ದಾರೆ. ಪಟಾಕಿ ಮಾರಾಟಕ್ಕೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ನಿರಾಕ್ಷೇಪಣ ಪತ್ರ ಕಡ್ಡಾಯವಾಗಿದ್ದು, ಆಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ಪಟಾಕಿ ಸ್ಟಾಲ್ ತೆರೆಯಲು ಅನುಮತಿ ನೀಡಲಾಗಿದೆ. ಶನಿವಾರದಿಂದ ತಾಲೂಕು ಕೇಂದ್ರದಲ್ಲಿ ಪಟಾಕಿ ಮಾರಾಟ ಆರಂಭವಾಗಿದ್ದು, ಜನರು ಮಕ್ಕಳೊಂದಿಗೆ ಪಟಾಕಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.