ಸುಧಾರಣೆ ಕಾಣದ ಚಿಕ್ಕೋಡಿ, ಬೆಳಗಾವಿ ಫಲಿತಾಂಶ
Apr 09 2025, 12:46 AM IST2025ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬೆಳಗಾವಿ ಶೈಕ್ಷಣಿಕ ಜಿಲ್ಲೆ (ಶೇ.65.37) ರಾಜ್ಯಕ್ಕೆ 26ನೇ ಸ್ಥಾನ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ (66.76) 24ನೇ ಸ್ಥಾನ ಪಡೆದುಕೊಂಡಿವೆ. ಎರಡೂ ಜಿಲ್ಲೆಗಳು ಶೈಕ್ಷಣಿಕ ಸುಧಾರಣೆ ಕಂಡಿಲ್ಲ. 2024ರಲ್ಲಿ 27ನೇ ಸ್ಥಾನ ಪಡೆದಿದ್ದ ಬೆಳಗಾವಿ ಈ ಬಾರಿ 26ನೇ ಸ್ಥಾನಕ್ಕೆ ಏರಿದೆ. ಕಳೆದ ಬಾರಿ 15ನೇ ಸ್ಥಾನಕ್ಕೇರಿದ್ದ ಚಿಕ್ಕೋಡಿ ಜಿಲ್ಲೆ ಈ ಬಾರಿ 24ನೇ ಸ್ಥಾನಕ್ಕೆ ಕುಸಿದಿದೆ. ಚಿಕ್ಕೋಡಿ ಜಿಲ್ಲೆಯು ಶೈಕ್ಷಣಿಕ ಸುಧಾರಣೆ ತೀರಾ ಕುಸಿದಿದೆ.