ನಾಳೆ ಆರ್‌ಎಸ್‌ಎಸ್ ಪಥಸಂಚಲನ: ಸ್ವಾಗತಕ್ಕೆ ಬೆಳಗಾವಿ ಸಜ್ಜು

| Published : Oct 11 2025, 02:00 AM IST

ನಾಳೆ ಆರ್‌ಎಸ್‌ಎಸ್ ಪಥಸಂಚಲನ: ಸ್ವಾಗತಕ್ಕೆ ಬೆಳಗಾವಿ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯ ದಶಮಿ ಹಬ್ಬದ ನಿಮಿತ್ತ ಅ.12 ರಂದು ಆರ್‌ಎಸ್‌ಎಸ್ ಸ್ವಯಂ ಸೇವಕರ ಆಕರ್ಷಕ ಪಥ ಸಂಚಲನ ಜರುಗಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯ ದಶಮಿ ಹಬ್ಬದ ನಿಮಿತ್ತ ಅ.12 ರಂದು ಆರ್‌ಎಸ್‌ಎಸ್ ಸ್ವಯಂ ಸೇವಕರ ಆಕರ್ಷಕ ಪಥ ಸಂಚಲನ ಜರುಗಲಿದೆ. ನಗರದ ಸರ್ದಾರ ಮೈದಾನದಲ್ಲಿ ಸೇರುವ ಗಣವೇಷಧಾರಿಗಳು ಸಂಜೆ 5 ಗಂಟೆಗೆ ಪಥಸಂಚಲನ ಆರಂಭಿಸುವ ಒಂದು ತಂಡ ಚನ್ನಮ್ಮ ವೃತ್ತ, ಚವಾಟ ಗಲ್ಲಿ, ಭಡಕಲ ಗಲ್ಲಿ, ಮಾರುತಿ ಗಲ್ಲಿ, ಕುಲಕರ್ಣಿ ಗಲ್ಲಿ, ತಿಲಕ್‌ ಚೌಕ್‌ ಮಾರ್ಗವಾಗಿ ಲಿಂಗರಾಜ ಕಾಲೇಜು ಮೈದಾನಕ್ಕೆ ತಲುಪಲಿದ್ದಾರೆ.

ಮತ್ತೊಂದು ತಂಡ ಚನ್ನಮ್ಮ ವೃತ್ತ, ಕಾಕತಿವೆಸ್‌, ಸಮಾದೇವಿ ಗಲ್ಲಿ, ತಿಲಕ್‌ ಚೌಕ್‌ ಮಾರ್ಗವಾಗಿ ಲಿಂಗರಾಜು ಕಾಲೇಜು ಮೈದಾನಕ್ಕೆ ತಲುಪುವ ಮೂಲಕ ಪಥಸಂಚಲನ ಪೂರ್ಣಗೊಳಿಸುವರು.

ಗಣವೇಷಧಾರಿಗಳು ಸಾಗುವ ಮಾರ್ಗದುದ್ದಕ್ಕೂ ಬೆಳಗಾವಿಯ ನಾಗರೀಕರು ಅಲ್ಲಲ್ಲಿ ಹೂಮಳೆ ಮತ್ತು ರಸ್ತೆಯುದ್ದಕ್ಕೂ ರಂಗೋಲಿ ಹಾಕಿ ಭಾರತ ಮಾತಾಕೀ ಜೈ ಘೋಷದ ಸ್ವಾಗತದೊಂದಿಗೆ ಸ್ವಾಗತ ಮಾಡಿಕೊಳ್ಳುವ ತಯಾರಿಯಲ್ಲಿದ್ದಾರೆ. ಪಥಸಂಚಲನದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮದವಣಗಿತ್ತಿಯಂತೆ ಅಲಂಕಾರಗೊಳ್ಳಲಿದ್ದು, ಎಲ್ಲಿ ನೋಡಿದರು ಕೇಸರಿಮಯವಾಗಲಿದೆ.