ಪರೀಕ್ಷೆಗೆ ಸೀಮಿತವಾದ ವಿದ್ಯಾಭ್ಯಾಸ ಸಲ್ಲದು
Jul 31 2024, 01:11 AM ISTಕನ್ನಡಪ್ರಭ ವಾರ್ತೆ ವಿಜಯಪುರ ಜ್ಞಾನ ಅಸೀಮವಾದದ್ದು. ಜ್ಞಾನವೇ ನಿಜವಾದ ಪ್ರಕಾಶ, ಜೀವನ ಪೂರ್ತಿ ವಿದ್ಯೆ ಸಂಗ್ರಹಿಸಿ ಸಮಾಜದ ಒಳಿತಿಗೆ ಬಳಸಬೇಕು. ನಿಜವಾದ ವಿದ್ಯೆಯಿಂದ ಬದುಕು ಪರಿವರ್ತನೆ ಆಗಲು ಸಾಧ್ಯ ಎಂದು ಕಾತ್ರಾಳ-ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು. ನಗರದ ಇಟ್ಟಂಗಿಹಾಳ ರಸ್ತೆಯ ಎಕ್ಸಲೆಂಟ್ ಶಾಲೆಯಲ್ಲಿ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ವಿದ್ಯಾಲಯ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಗತಿವಿಧಿ, ಪ್ರಾಂತಮಟ್ಟದ ಶಿಕ್ಷಕ ಸ್ವಾಧ್ಯಾಯ ಸಮಾರೋಪ ಸಮಾರಂಭದದಲ್ಲಿ ಅವರು ಮಾತನಾಡಿದರು.