ಮಲ್ಲಪ್ಪನಹಳ್ಳಿ ಮನೆಯಲ್ಲಿದ್ದ ಫ್ರಿಡ್ಜ್ ಸ್ಫೋಟ
Oct 30 2025, 01:15 AM ISTಮಲ್ಲಪ್ಪನಹಳ್ಳಿ ಗ್ರಾಮದ ಈರಪ್ಪ ಎಂಬುವರ ಪುತ್ರ ನಿಂಗರಾಜು ಅವರ ಮನೆಯಲ್ಲಿ ಸೋಮವಾರ ಮಧ್ಯಾಹ್ನ ಫ್ರಿಜ್ ಸ್ಫೋಟಗೊಂಡು ಸುಟ್ಟು ಕರಕಲಾಗಿದೆ. ಜತೆಗೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿತ್ತು. ಮನೆಗೆ ಬೀಗ ಹಾಕಿ ಜಮೀನಿನಲ್ಲಿ ಹಸುಗಳಿಗೆ ಜೋಳದ ಕಡ್ಡಿ ತರಲು ಹೋಗಿದ್ದ ಸಂದರ್ಭದಲ್ಲಿ ಫ್ರಿಜ್ ಸ್ಪೋಟಗೊಂಡು ಮನೆ ಹೆಂಚುಗಳು ಹಾರಿಹೋಗಿದೆ. ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯವರು ಹೆದರಿ ಅಗ್ನಿಶಾಮಕ ಠಾಣೆಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕರು ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ಘಟಿಸದಂತೆ ಕ್ರಮಕೈಗೊಂಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ಹಾಗೂ ಮನೆ ಕಪ್ಪು ಮಸಿಯಂತಾಗಿದೆ ಆದರೆ ಗ್ಯಾಸ್ ಸಿಲಿಂಡರ್ ಹಾಗೂ ಇತರೆ ವಸ್ತುಗಳಿಗೆ ಬೆಂಕಿತಾಗದೇ ಇರುವುದು ಸಮಾಧಾನ ಮೂಡಿಸಿದೆ.