ಸಿಲಿಂಡರ್ ಸ್ಫೋಟ: ಐವರಿಗೆ ತೀವ್ರ ಗಾಯ
Jul 03 2024, 12:21 AM ISTಅಡುಗೆ ಮಾಡುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ಐವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದ ಎಸ್ಒಜಿ ಕಾಲನಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ನಗರದ ಎಸ್ಒಜಿ ಕಾಲನಿ ವಾಸಿಗಳಾದ ಲಲಿತಮ್ಮ ಮಲ್ಲೇಶಪ್ಪ (50), ಮಲ್ಲೇಶಪ್ಪ (60), ಪಾರ್ವತಮ್ಮ (45), ಸೌಭಾಗ್ಯ (36) ಹಾಗೂ ಪ್ರವೀಣ (35) ಗಂಭೀರವಾಗಿ ಗಾಯಗೊಂಡಿದ್ದಾರೆ.