ಅರಸೀಕೆರೆ ನಗರಸಭೆ ಉಪಚುನಾವಣೆ ಹಿನ್ನೆಲೆ ಸಂತೋಷ್ ಸಭೆ
Nov 11 2024, 11:51 PM ISTನ.23ರಂದು ನಡೆಯಲಿರುವ ಇಲ್ಲಿನ ನಗರಸಭೆ ಎಂಟು ವಾರ್ಡ್‌ಗಳ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಗೆಲುವಿಗೆ ಶಕ್ತಿ ಮೀರಿ ಹೋರಾಟ ನಡೆಸಲು ಕಂಕಣ ಬದ್ಧರಾಗೋಣ ಎಂದು ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಉತ್ಸಾಹ ತುಂಬಿದರು. ವಾರ್ಡ್ ವ್ಯಾಪ್ತಿ, ಮತದಾರರ ಪಟ್ಟಿ ಎಲ್ಲವನ್ನೂ ಪರಿಶೀಲಿಸಿ ಗೆಲುವಿಗೆ ಸಮರ್ಥವಾಗಿ ಹೋರಾಟ ಮಾಡೋಣ.ಚುನಾವಣಾ ಪ್ರಚಾರದಲ್ಲಿ ಪಕ್ಷದ ಸಿದ್ಧಾಂತ ಅಳವಡಿಸಿಕೊಳ್ಳೋಣ ಎಂದರು.