ಉಪಚುನಾವಣೆ: ವಿಘ್ನೇಶ್ವರನ ಮೊರೆಹೋದ ರಾಜಕಾರಣಿಗಳು!
Aug 23 2024, 01:06 AM ISTಇನ್ನು ಗಣೇಶ ಮೂರ್ತಿಗಳ ವಿತರಣೆಯ ಹಿಂದೆ ಯುವಕರ ಸಂಘಟನೆಯ ಉದ್ದೇಶವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಯುವಕರನ್ನು ಸೆಳೆಯುವ ತಂತ್ರಗಾರಿಕೆ ಹಣೆಯಲಾಗಿದೆ. ಗಣೇಶ ವಿಗ್ರಹ ಪಡೆಯಲು ಬರುವ ಯುವಕರ ಮಾಹಿತಿ ಸಂಗ್ರಹಿಸಲು ತಂತ್ರಗಾರಿಕೆ ರೂಪಿಸಲಾಗಿದೆ. ಗಣೇಶ ಮೂರ್ತಿ ಪಡೆಯಲು ಹೆಸರು ನೋಂದಾಯಿಸಲು ಬರುವವರು ಕನಿಷ್ಠ ೧೦ ಜನರ ತಂಡದೊಂದಿಗೆ ಬರಬೇಕು, ಕಡ್ಡಾಯವಾಗಿ ಒಂದಿಬ್ಬರದಾದರೂ ಆಧಾರ್ ಕಾರ್ಡ್‌ಗಳನ್ನು ನೀಡಬೇಕು ಎಂಬ ಷರತ್ತನ್ನು ವಿಧಿಸಲಾಗಿದ್ದು, ಇದರ ಹಿಂದೆ ಯುವ ಪಡೆಯನ್ನು ಸೆಳೆಯುವ ಉದ್ದೇಶವಿರುವುದು ನಿಚ್ಚಳವಾಗಿದೆ.