ನಗರದಲ್ಲಿ ಸ್ಟಾರ್ಟ್ಅಪ್ ನಡೆಸುತ್ತಿರುವ ಅಮೆರಿಕ ಪ್ರಜೆ ಟೋನಿ ಕ್ಲೋರ್ ಎಂಬುವರು ಜಿಬಿಎ ಪೌರ ಕಾರ್ಮಿಕನಂತೆ ವಸ್ತ್ರ ಧರಿಸಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಯನ್ನು ಗುಡಿಸುವ ಮೂಲಕ ನಗರದ ರಸ್ತೆ, ಫುಟ್ಪಾತ್ ಮತ್ತು ಕಸದ ಅದ್ವಾನ, ಅವಾಂತರದ ಕುರಿತು ಬೆಳಕು ಚೆಲ್ಲಿದ್ದಾನೆ.
ಅಮೆರಿಕ ನಿರ್ಬಂಧ ಹೇರಿದ ಹಿನ್ನೆಲೆ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಹೊಸದಾಗಿ ತೈಲ ಖರೀದಿ ನಿಲ್ಲಿಸಿದೆ. ಅಮೆರಿಕ ನಿರ್ಬಂಧದ ಪರಿಣಾಮ, ಪಾವತಿ ವಿಧಾನ ಕುರಿತ ಗೊಂದಲ ಬಗೆಹರಿಯುವವರೆಗೂ ರಷ್ಯಾದ ರೋಸ್ನೆಫ್ಟ್ ಮತ್ತು ಲುಕೋಯಿಲ್ನಿಂದ ತೈಲ ಖರೀದಿ ಸ್ಥಗಿತಕ್ಕೆ ನಿರ್ಧರಿಸಿವೆ.
ಕರ್ನಾಟಕದ ಚಾಮರಾಜನಗರದ ಗಡಿಭಾಗದಲ್ಲಿರುವ ಗುಮಟಾಪುರದಲ್ಲಿ ನಡೆಯುವ ವಿಶಿಷ್ಟ ಸಗಣಿ ಎರಚಾಡುವ ‘ಗೋರೆ ಹಬ್ಬ’ದ ಕುರಿತು ವಿದೇಶಿ ಯೂಟ್ಯೂಬರ್ ಒಬ್ಬ ಅಪಹಾಸ್ಯಕರ ವಿಡಿಯೋ ಮಾಡಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮೊದಲು ಎಚ್-1ಬಿ ವೀಸಾ ದರವನ್ನು ಹೆಚ್ಚಿಸುವ ಮೂಲಕ ಅಮೆರಿಕದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದ ಭಾರತೀಯರ ಪಾಲಿಗೆ ಅದನ್ನು ದುಃಸ್ವಪ್ನವಾಗಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಮೆರಿಕದ ಕಾಲೇಜುಗಳಲ್ಲಿ ಜ್ಞಾನಾರ್ಜನೆಯ ಆಸೆ ಹೊತ್ತಿರುವವರಿಗೆ ಶಾಕ್ ನೀಡಿದ್ದಾರೆ.
ಅಮೆರಿಕ ಮೂಲದ ಆಂಥ್ರೊಪಿಕ್ ಎನ್ನುವ ಕೃತಕ ಬುದ್ಧಿಮತ್ತೆ (ಎಐ) ಸುರಕ್ಷತೆ ಮತ್ತು ಸಂಶೋಧನಾ ಸ್ಟಾರ್ಟಪ್ ಕಂಪನಿಯ ಹೊಸ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಆಗಿ ಬಾಗಲಕೋಟೆ ಮೂಲದವರಾದ ರಾಹುಲ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
ಅಮೆರಿಕದ ತೆರಿಗೆಯಿಂದಾಗಿ ಭಾರತದ ಮೇಲೆ ಒತ್ತಡ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಧ್ಯಕ್ಷ ಪುಟಿನ್ಗೆ ನೇರವಾಗಿ ಕರೆ ಮಾಡಿ ಉಕ್ರೇನ್ ಜತೆಗಿನ ಯುದ್ಧದಲ್ಲಿ ಅವರ ಮುಂದಿನ ನಡೆಯೇನೆಂದು ವಿಚಾರಿಸಿದ್ದಾರೆ ಎಂದು ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಹೇಳಿದ್ದಾರೆ.