ಪೂರ್ಣವಾಗದ ಹಾರನಹಳ್ಳಿ ಪಶು ಆಸ್ಪತ್ರೆ ಕಟ್ಟಡ

Sep 06 2024, 01:02 AM IST
ಸುಮಾರು 42 ಲಕ್ಷ ರು. ವೆಚ್ಚದಲ್ಲಿ ಪಶು ಇಲಾಖೆ ಕಟ್ಟಡ ಆರಂಭವಾಗಿ ಎರಡು ವರ್ಷವಾದರೂ ಕಾಮಗಾರಿ ಹಣದ ಕೊರತೆಯಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಹೊಸ ಕಟ್ಟಡದ ನೆಲಹಾಸು ಹಾಗೂ ಕಟ್ಟಡ ಮೇಲೆ ಕಟ್ಟಿದ ರೂಮ್‌ಗಳಿಗೆ ಕಾಮಗಾರಿ ಕೆಲಸಗಳು ಬಾಕಿ ಇದೆ. ಕಟ್ಟಡದ ಶಿಥಿಲಾವಸ್ಥೆಯಲ್ಲಿದ್ದು ಇದನ್ನು ಮನಗಂಡ ಇಲಾಖೆ ಹೊಸ ಕಟ್ಟಡಕ್ಕೆ ಕಟ್ಟಿಸಲು ಆರಂಭ ಮಾಡಿದ್ದು, ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ ಎರಡು ವರ್ಷವಾದರೂ ಕಾಮಗಾರಿ ಮುಗಿಯದೆ ಹಳೆ ಪಶು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸ್ಥಿತಿ ಉದ್ಭವವಾಗಿದೆ. ತಕ್ಷಣ ಪಶು ಇಲಾಖೆಯ ಕಾಮಗಾರಿಯನ್ನು ಮುಗಿಸುವಂತೆ ರೈತ ಸಂಘದ ಮುಖಂಡ ಕನ್ನಕಂಚೇನಹಳ್ಳಿ ಪ್ರಸನ್ನ ಕುಮಾರ್ ಅವರು ಆಗ್ರಹಿಸಿದ್ದಾರೆ.