ಕನ್ನಡ ಸಾಹಿತ್ಯಕ್ಕೆ ತಿರುವು ನೀಡಿದವರು ಅನಕೃ
Jul 22 2025, 01:16 AM ISTಪ್ರಸ್ತುತ ಕನ್ನಡ ಭಾಷೆ ಇಷ್ಟೊಂದು ಉನ್ನತ ಸ್ಥಿತಿಯಲ್ಲಿ ವಿಜೃಂಭಿಸುತ್ತಿದೆ ಎಂದರೆ ಅದರ ದೊಡ್ಡ ಶ್ರೇಯಸ್ಸು ಅನಕೃ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ತಿಳಿಸಿದರು. ಅನಕೃ ಭಾಷಣವನ್ನು ಎಲ್ಲರೂ ಕುಳಿತು ಕೇಳುತ್ತಿದ್ದರು. ಅವರು ಯುವಕರನ್ನು ಪ್ರೋತ್ಸಾಹಿಸುವ ವಾಕ್‌ಚಾತುರ್ಯ ಹೇಗಿತ್ತು ಎಂದರೆ, ಒಮ್ಮೆ ಅನಕೃ ಅವರನ್ನು ಭಾಷಣ ಮಾಡಲು ಕರೆಯಲು ಬಂದಾಗ, ಅವರನ್ನು ನನ್ನ ಕೊಠಡಿಗೆ ಕರೆದುಕೊಂಡು ಬಂದು ನೀವು ಇವರ ಊರಿಗೆ ಹೋಗಿ ಭಾಷಣ ಮಾಡಬೇಕೆಂದು ಹೇಳಿದರು. ಈ ವೇಳೆ ನೀವ್ಯಾಕೆ ಬಂದಿರಿ ನಾನೇ ಬರುತ್ತಿದ್ದೆ ಎಂದಾಗ ನಿಮ್ಮ ನೋಡಬೇಕು ಎನಿಸಿತು ಬಂದೆ ಎಂದು ಹೇಳಿದರು. ಅಂದರೆ, ಬೆಳೆಯುವ ಚೈತನ್ಯಕ್ಕೆ ಅವಕಾಶ ಒದಗಿಸಬೇಕು ಎಂದು ಹೇಳುತ್ತಿದ್ದರು ಎಂದರು.