ಪಿಎಂ ವಿಶ್ವಕರ್ಮ ನೋಂದಣಿ: ಕರ್ನಾಟಕ ನಂ.1
Jan 13 2024, 01:31 AM ISTಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ರಾಜೀವ ಚಂದ್ರಶೇಖರ ಅವರ ಕನಸಿನ ಕೂಸಾದ ‘ಪಿಎಂ ವಿಶ್ವಕರ್ಮ ಯೋಜನೆ’ಯ ನೋಂದಣಿಯಲ್ಲಿ ಸಚಿವ ರಾಜೀವ್ ಅವರ ತವರು ರಾಜ್ಯ ಕರ್ನಾಟಕ, ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. 2023ರ ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಅವರು ಈ ಯೋಜನೆಗೆ ದೇಶಾದ್ಯಂತ ಚಾಲನೆ ನೀಡಿದ್ದರು. ಜ.11ರ ವರೆಗೆ ಬರೀ ನಾಲ್ಕು ತಿಂಗಳಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 19,18,888 ಕರಕುಶಲಕರ್ಮಿಗಳು ಈ ಯೋಜನೆಗೆ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.