ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳೇ ಟಾರ್ಗೆಟ್: ರೇಣುಕಾಚಾರ್ಯ
Jan 08 2024, 01:45 AM ISTರಾಜ್ಯದಲ್ಲಿ ಹಿಂದೂಗಳ, ಕರ ಸೇವಕರನ್ನೇ ಸಿದ್ದರಾಮಯ್ಯ ಸರ್ಕಾರ ಗುರಿ ಮಾಡುತ್ತಿದೆ. ಇದು ರೈತ ವಿರೋಧಿ, ಹಿಂದು ವಿರೋಧಿ, ತುಘಲಕ್ ಸರ್ಕಾರವಾಗಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ದಾಂಧಲೆ, ಗಲಭೆ ಪ್ರಕರಣದ ಆರೋಪಿಗಳ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಮ್ಮ ಬ್ರದರ್ಸ್ ಎನ್ನುತ್ತಾರೆ. ಪೊಲೀಸ್ ಠಾಣೆ, ವಾಹನಗಳು, ಜನ ಸಾಮಾನ್ಯರ ಮನೆಗಳಿಗೆ ನುಗ್ಗಿದವರು, ಮನೆ, ವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿಗಳ ಮೇಲಿನ ಕೇಸ್ ಹಿಂಪಡೆಯಲು ಮುಂದಾಗಿದ್ದಾರೆ.