ಅಕ್ರಮ ಲೇಔಟ್ ಕಾಮಗಾರಿ ನಿಲ್ಲಲಿ
Jan 10 2025, 12:46 AM IST೨೦೨೫ ಜನವರಿಯಲ್ಲಿ ೭೩-೩ ಎಕರೆ ಜಾಗವನ್ನು ಮಾಜಿ ಶಾಸಕರೋರ್ವರು ಮತ್ತವರ ತಂಡದವರು ೯೭ ಮಂದಿಗೆ ಅಕ್ರಮವಾಗಿ ಖಾಯಂ ಸಾಗುವಳಿ ಚೀಟಿ ನೀಡಿ ಭೂ ಕಬಳಿಕೆ ಮಾಡಿ, ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕಾಗಿ ೨೫ ಎಕರೆ ಖರಾಬು ಜಾಗವನ್ನೂ ಕಬಳಿಸಿ ಅಕ್ರಮವಾಗಿ ಲೇಔಟ್ ಮಾಡುತ್ತಿದ್ದು, ಈ ಕಾಮಗಾರಿ ನಿಲ್ಲಬೇಕು. ಅಲ್ಲಿಯವರೆಗೂ ನಮ್ಮದು ನಿರಂತರ ಕಾನೂನು ಹೋರಾಟ ಇರುತ್ತದೆ. ಇಲ್ಲವಾದರೆ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ವಕೀಲರಾದ ಎಂ.ಡಿ. ಗೋಪಾಲೇಗೌಡ ಎಚ್ಚರಿಕೆ ನೀಡಿದರು.