ರಾಜಪ್ಪ ಮಾಸ್ತರ್ ಸುಸಂಸ್ಕೃತ ವ್ಯಕ್ತಿಗಳ ರೂಪಿಸುವ ಕಾರ್ಖಾನೆ

Feb 07 2024, 01:45 AM IST
ಶಿಕ್ಷಕ ವೃತ್ತಿ ಮೂಲಕ ಸುಸಂಸ್ಕೃತ ವ್ಯಕ್ತಿಯನ್ನು ರೂಪಿಸುವ ಕಾರ್ಖಾನೆ ಆಗಿರುವ ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಅವರನ್ನು 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅವರ ಹಿರಿತನ ಮತ್ತು ಸಾಮಾಜಿಕ ಚಳವಳಿಗೆ ಸಂದ ಗೌರವವಾಗಿದೆ. ಸೊರಬ ಪಟ್ಟಣದಲ್ಲಿ ಫೆ.9ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿಯೊಬ್ಬರಿಗೂ ಹಬ್ಬವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಜಗಲಿ ಸದಸ್ಯರು ಇಡೀ ದಿನ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ರಾಜಪ್ಪ ಮಾಸ್ತರ್ ಅವರ ಸರ್ವಾಧ್ಯಕ್ಷತೆಯ ಕನ್ನಡದ ಜಾತ್ರೆ ಯಶಸ್ವಿಯಾಗಲು ತಾವೆಲ್ಲರೂ ಸಹಕಾರ ನೀಡಬೇಕು ಎಂದು ಕನ್ನಡ ಸಾಂಸ್ಕೃತಿಕ ಜಗಲಿ ಸಂಚಾಲಕ ಎನ್.ಷಣ್ಮುಖಾಚಾರ್ ಸೊರಬದಲ್ಲಿ ಹೇಳಿದ್ದಾರೆ.

ತುಂಗಭದ್ರಾ ಸಕ್ಕರೆ ಕಾರ್ಖಾನೆ ಜಾಗ ಸರ್ವೆಗೆ ಗ್ರಾಮಸ್ಥರ ವಿರೋಧ

Feb 03 2024, 01:46 AM IST
ಶಿವಮೊಗ್ಗದ ಮಲವಗೊಪ್ಪ ಗ್ರಾಮದಲ್ಲಿ ಶುಕ್ರವಾರ ಸರ್ವೆಗೆ ಮುಂದಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಆರ್‌ಐ ಮತ್ತು ವಿಎಒ ಸರ್ವೆ ಕಾರ್ಯ ನಿಲ್ಲಿಸಿದರು. ತುಂಗಭದ್ರ ಸಕ್ಕರೆ ಕಾರ್ಖನೆ ಜಾಗದ ವಿವಾದ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್‌ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದರು. ಕಂದಾಯ ನಿರೀಕ್ಷಕ ಮತ್ತು ಗ್ರಾಮ ಆಡಳಿತಾಧಿಕಾರಿ (ವಿಎಒ) ಸರ್ವೆ ಕಾರ್ಯ ಆರಂಭಿಸಿದ್ದರು. ಈ ವೇಳೆ ಸರ್ವೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿದರು.