ಜಾತಿ ಗಣತಿ ಕೇಂದ್ರ ನಮ್ಮನ್ನು ನೋಡಿ ಘೋಷಿಸಿದೆ
Jul 27 2025, 12:00 AM ISTರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡುವ ಯೋಗ್ಯತೆ ಇಲ್ಲ ಎಂಬ ಮೈಸೂರು ಸಂಸದ ಯದುವೀರ್ ಕೃಷ್ಣರಾಜ ಒಡೆಯರ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ನಾವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರದಲ್ಲಿ ಗಣತಿ ಮಾಡುತ್ತಿದ್ದೇವೆ, ಹಿಂದೆ ಕೂಡ ಮಾಡಿದ್ದೆವು. ಆದರೆ ಆ ಬಗ್ಗೆ ಕೆಲವು ಸಂಘ ಸಂಸ್ಥೆಗಳು, ಪ್ರಬಲ ಸಮಾಜಗಳು ಅಪಸ್ವರ ಎತ್ತಿದ್ದರಿಂದ, ಮರುಗಣತಿ ಮಾಡಿ ಎಂದು ಹೇಳಿದ್ದರಿಂದ ಈಗ ಮತ್ತೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು. ಯದುವೀರ್ ಅವರು ಇನ್ನೂಎಲ್ಲಾ ಕಲಿತುಕೊಳ್ಳಲಿ,ಪಾಪ ಅವರಿಗಿನ್ನೂ ಅನುಭವ ಇಲ್ಲ, ಕೇಂದ್ರ ಸರ್ಕಾರ ನಮ್ಮನ್ನ ನೋಡಿ ಅನೌನ್ಸ್ ಮಾಡಿದೆ ಎಂದು ಕುಟುಕಿದರು.