ಕಾಂತರಾಜು ವರದಿ ಜಾತಿ ಗಣತಿ ಸಮೀಕ್ಷೆಯಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ವರದಿಯಾಗಿದ್ದು, ಇದರಿಂದ ಯಾರಿಗೂ ನಷ್ಟವಾಗುವುದಿಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಜಾತಿ ಗಣತಿ ವರದಿಯನ್ನು ವಿರೋಧ ಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ಜಾತಿವಾರು ಸಮೀಕ್ಷೆ-2015ರ ವರದಿಯಲ್ಲಿ ಕುರುಬ ಮತ್ತು ಉಪಜಾತಿಗಳು, ಸವಿತಾ ಸಮಾಜ, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ 2-ಎ ದಿಂದ ತೆಗೆದು ಅತ್ಯಂತ ಹಿಂದುಳಿದ ಎಂದು ಮರು ವರ್ಗೀಕರಣ ಮಾಡಿ ಪ್ರವರ್ಗ 1-ಬಿ ಗೆ ಸೇರಿಸಲು ಶಿಫಾರಸು ಮಾಡಲಾಗಿದೆ.
ಜಾತಿ ಗಣತಿ ವರದಿ ಕಳೆದ ಶುಕ್ರವಾರ ಸಂಪುಟ ಸಭೆಯಲ್ಲಿ ಮಂಡನೆಯಾಗಿ ಜಾತಿವಾರು ಜನಸಂಖ್ಯೆಯ ಅಂಶಗಳು ಹೊರಬೀಳುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು ಮುಗೆ ಬಿದ್ದಿದ್ದಾರೆ.