ಸಿಇಟಿ ನೀಟ್ ಮಾದರಿಯ ಉಚಿತ ಅಣಕು ಪರೀಕ್ಷೆ

Mar 19 2025, 12:32 AM IST
ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯಿದ್ದು, ೨೦೨೫ ಮಾರ್ಚ್ ೧೯ರಂದು ಬುಧವಾರ ಬೆಳಗ್ಗೆ ೧೦.೩೦ರಿಂದ ೧೨ ಗಂಟೆಯವರೆಗೆ ಮಲ್ನಾಡ್ ಕೋಚಿಂಗ್ ಸೆಂಟರ್ ವತಿಯಿಂದ ಉಚಿತವಾಗಿ ಸಿಇಟಿ ಮತ್ತು ನೀಟ್ ಮಾದರಿಯ ಅಣಕು ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್ ನಿರ್ದೇಶಕಿ ಮೇಘನಾ ತಿಳಿಸಿದರು. ೨೦೨೫ರ ನೂತನ ರೀತಿಯ ಪ್ರಶ್ನೆ ಪತ್ರಿಕೆಯ ವಿಧಾನ ದ್ವಿತೀಯ ಪಿಯುಸಿ ೩೫ ಪ್ರಥಮ ಪಿಯುಸಿ ೧೫ ಪ್ರಾಯೋಗಿಕ ಪಠ್ಯದಲ್ಲಿ ೫ರಿಂದ ೧೦ ಪ್ರಶ್ನೆಗಳು ಬಿಎಸ್ಸಿ, ಪಶು ವೈದ್ಯಕೀಯ, ಅರಣ್ಯ ಮೀನುಗಾರಿಕೆ, ಕೃಷಿ, ತೋಟಗಾರಿಕೆ ಕೋರ್ಸ್‌ಗಳಿಗೆ ತರಬೇತಿ ಮಲ್ನಾಡ್ ಕೋಚಿಂಗ್ ಸೆಂಟರ್‌ನಲ್ಲಿ ಮಾರ್ಚ್ ೨೦ರಿಂದ ಪ್ರಾರಂಭ ವಾಗಲಿದೆ ಎಂದು ಹೇಳಿದರು.