ನಗರ ಪೊಲೀಸ್ ಠಾಣೆ ಕಟ್ಟಡ ಮೇಲಿಂದ ಜಿಗಿದು ವ್ಯಕ್ತಿ ಸಾವು
Sep 29 2024, 01:31 AM ISTನಗರ ಪೊಲೀಸ್ ಸಂಕೀರ್ಣದ ಕಟ್ಟಡದ ಮೇಲಿಂದ ನೆಗೆದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ.ಹೊಳೆನರಸೀಪುರ ತಾಲೂಕಿನ ಡೊಡ್ಡಕಾಡನೂರು ಮಲ್ಲೆನಹಳ್ಳಿ ನಿವಾಸಿ ಸುನೀಲ್ (30 ವರ್ಷ) ಎಂಬುವನೇ ಮೇಲಿಂದ ಕೆಳಗೆ ಬಿದ್ದು ಸಾವನಪ್ಪಿದ ದುರ್ದೈವಿ. ಪೊಲೀಸ್ ಠಾಣೆ ಮೇಲಿಂದ ಏತಕ್ಕಾಗಿ ಬಿದ್ದು ಪ್ರಾಣ ಬಿಟ್ಟಿದ್ದಾನೆ ಎಂಬುದರ ಬಗ್ಗೆ ಸತ್ಯಾಂಶ ತಿಳಿದು ಬಂದಿಲ್ಲ.