ಲಾಟರಿ ಮೂಲಕ ಬಿಜೆಪಿ ಪಾಲಾದ ಹಂಚೂರು ಗ್ರಾಪಂ
Sep 10 2024, 01:36 AM ISTಆಲೂರು ತಾಲೂಕಿನ ಹಂಚೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಲಾಟರಿ ಮೂಲಕ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪುಷ್ಪ ಹಾಗೂ ಉಪಾಧ್ಯಕ್ಷರಾಗಿ ಷಣ್ಮುಖ ಚುನಾಯಿತರಾದರು. ಓರ್ವ ಮಹಿಳಾ ಸದಸ್ಯರ ಮತ ತಿರಸ್ಕಾರಗೊಂಡಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು ಅವರು ಲಾಟರಿ ಆಯ್ಕೆ ಪ್ರಕ್ರಿಯೆ ನಡೆಸಿದರು. ಲಾಟರಿಯಲ್ಲಿ ಪುಷ್ಪ ಹಾಗೂ ಷಣ್ಮುಖ ಅವರಿಗೆ ಅದೃಷ್ಟ ಒಲಿಯಿತು.