ಬಿಜೆಪಿ ಪದಾಧಿಕಾರಿಗಳ ಮರು ನಿಯೋಜನೆ

Oct 23 2023, 12:15 AM IST
ಕನ್ನಡಪ್ರಭ ವಾರ್ತೆ ಕಾರವಾರಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಯಲ್ಲಾಪುರ ಹಾಗೂ ಭಟ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಹುದ್ದೆಯಿಂದ ಬಿಡುಗಡೆ ಮಾಡಿದ್ದ ಪದಾಧಿಕಾರಿಗಳನ್ನು ಮರು ನಿಯೋಜನೆ ಮಾಡಿ ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ ಆದೇಶ ಹೊರಡಿಸಿದ್ದಾರೆ.ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಉಪಾಧ್ಯಕ್ಷೆ ಕಲ್ಪನಾ ಗಜಾನನ ನಾಯ್ಕ, ಶಕ್ತಿ ಕೇಂದ್ರದ ಪ್ರಮುಖ ಬಾಬು ಬಾಂದೇಕರ, ತಾಲೂಕು ಮಾಧ್ಯಮ ಪ್ರಕೋಷ್ಠದ ಸಂಚಾಲಕರ ಕೆ.ಟಿ. ಹೆಗಡೆ, ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠ್ಠಲ ಜಾನು ಪಾಂಡ್ರಮಿಶೆ, ಜಿಲ್ಲಾ ವಿಶೇಷ ಆಮಂತ್ರಿತ ಗಣಪತಿ ಆರ್. ಗಾಂವಕರ ಮರು ನಿಯೋಜನೆಗೊಂಡಿದ್ದಾರೆ.