ಬಿಬಿಎಂಪಿಯ ಮಳೆಗಾಲದ ಸಿದ್ಧತೆಯ ವಾಸ್ತವವನ್ನು ಮೇ ತಿಂಗಳ ಬೇಸಿಗೆ ಕಾಲದ ಮಳೆಯೇ ಬಟಾ ಬಯಲು ಮಾಡಿದೆ. ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಜಲಸಾರಿಗೆ ಶುರುವಾಗಿದ್ದು, ಪ್ರಾಣಾಪಾಯ ನಷ್ಟ-ಕಷ್ಟಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ
ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಒಳಭಾಗದಲ್ಲಿ ಮಳೆ ಸ್ವಲ್ಪ ಮಟ್ಟಿಗೆ ತಗ್ಗಿದೆ. ಆದರೆ ಉಡುಪಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಕೆಲವೆಡೆ ಅಣೆಕಟ್ಟೆಗಳು ತುಂಬಿವೆ. ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಮಳೆ ಮುಂದುವರಿಯಲಿರುವ ಸೂಚನೆಗಳ ಆಧಾರದಲ್ಲಿ ಶಾಲೆಗಳು ಪುನರಾರಂಭವಾಗಬೇಕಾಗಿದ್ದ ಮೇ 29 ಹಾಗೂ 30ರಂದು ಮುಂಜಾಗ್ರತೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.