ಭಾರತ ಮತ್ತು ಪಾಕ್ ನಡುವಿನ ಕದನವಿರಾಮಕ್ಕೆ ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂದು ಟ್ರಂಪ್ ಇದೀಗ 12ನೇ ಬಾರಿ ಹೇಳಿಕೊಂಡಂತಾಗಿದೆ.
ಫ್ರಾನ್ಸ್‌ನ ಅತ್ಯಾಧುನಿಕ ಯುದ್ಧವಿಮಾನ ರಫೇಲ್‌ನ ಬಾಡಿ (ಫ್ಯೂಸೆಲಾಜ್) ಇನ್ನು ಭಾರತದಲ್ಲೇ ನಿರ್ಮಾಣವಾಗಲಿದೆ. ಈ ಸಂಬಂಧ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಕಂಪನಿಯು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಇಸ್ಕಾನ್ ಜಗನ್ನಾಥ ಮಂದಿರದ ರಥದ ಚಕ್ರಗಳನ್ನು ಬದಲಿಸುವ 20 ವರ್ಷಗಳ ಪ್ರಯತ್ನ ಈಗ ಫಲ ನೀಡಿದೆ, ವಿಶೇಷವೆಂದರೆ, ಈ ರಥಕ್ಕೆ ಬೋಯಿಂಗ್ ವಿಮಾನದ ಚಕ್ರವನ್ನು ಅಳವಡಿಸಲಾಗಿತ್ತು. ಅದರ ಜಾಗಕ್ಕೀಗ ಸುಖೋಯ್ ಯುದ್ಧವಿಮಾನದ ಚಕ್ರಗಳು ಬರಲಿವೆ.
ಐದು ಗ್ಯಾರಂಟಿ ಯೋಜನೆಗಳು ಮುಂದಿನ ಚುನಾವಣೆಗೆ ಲಂಚದ ರೂಪದಲ್ಲಿವೆ. ಅಡ್ವಾನ್ಸ್ ಆಗಿ ಜನರಿಗೆ ಮಂಕುಬೂದಿ ಎರಚುತ್ತಿರುವ ಕಾರ್ಯಕ್ರಮ . ಇವೆಲ್ಲವೂ ಓಟಿಂಗ್ ಗಿಮಿಕ್ ಎಂದು ಕುಟುಕಿದರು.