4ರಂದು ರೈತ ಸಂಘ ಕರಾಳ ದಿನ ಆಚರಣೆ
Jan 02 2024, 02:15 AM ISTಅನ್ನದಾತರ ಕಷ್ಟಗಳು, ನಷ್ಟಗಳು ಹೇಳಲು ಸಾಧ್ಯವಾಗುವುದಿಲ್ಲ. ಪ್ರತಿ ಹಂತದಲ್ಲಿ ಶೋಷಣೆಗೆ ಈಡಾಗುವುದು ರೈತರು. ಅವರ ಬೆಳೆಗಳಿಗೆ, ಬೆವರಿಗೆ ಸೂಕ್ತ ಬೆಲೆ ದೊರೆಯುವುದು ಅಪರೂಪವೇ ಸರಿ. ಹೇಗೇ ಅಳೆದು ಸುರಿದೂ ತೂಗಿದರೂ ನಷ್ಟ ಎಂಬುದು ರೈತರ ಪಾಲಿಗೆ ಇದ್ದೇ ಇರುತ್ತದೆ. ಇದಕ್ಕೆ ಕಾರಣ ಸರ್ಕಾರಗಳು ರೈತರ ಬಗ್ಗೆ ಗಂಭೀರ ಕಾಳಜಿ ವಹಿಸಿ ಸ್ಪಂದಿಸದಿರುವುದು. ಪ್ರತಿವರ್ಷ 4ರಂದು ರೈತ ಸಂಘ ಸಂಸ್ಥಾಪನಾ ದಿನ ಆಚರಿಸುತ್ತಿತ್ತು. ಆದರೆ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ನೊಂದು ಇದೇ ದಿನವನ್ನು ಈಗ ಕರಾಳ ದಿನ ಎಂದು ಆಚರಿಸುತ್ತೇವೆಂದು ಸಾಗರದಲ್ಲಿ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದ್ದಾರೆ.