ದೇಸಿ ಹಬ್ಬಗಳಿಂದ ಬಾಂಧವ್ಯ ವೃದ್ಧಿ: ಗತಿಪರ ರೈತ ಪಾಂಡುರಂಗ ಸಣ್ಣಪ್ಪನವರ
Jan 15 2024, 01:46 AM ISTಬಾಗಲಕೋಟೆ: ಜಾನಪದ ಮತ್ತು ಸಂಸ್ಕೃತಿಗಳು ನಮ್ಮ ದೇಶದ ಪ್ರತೀಕವಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಹೊಣೆ ಯುವಕರ ಮೇಲಿದೆ ಎಂದು ಬೆನಕಟ್ಟಿಯ ಪ್ರಗತಿಪರ ರೈತ ಪಾಂಡುರಂಗ ಸಣ್ಣಪ್ಪನವರ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸಂಕ್ರಾಂತಿ ಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾಷಣ, ರಂಗೋಲಿ, ಪ್ರಬಂಧ, ಹಗ್ಗಜಗ್ಗಾಟ, ಮ್ಯೂಸಿಕಲ್ ಚೇರ್, ಜಾನಪದ ನೃತ್ಯ, ಜಾನಪದ ಗೀತೆಗಳು ಸೇರಿದಂತೆ ಹಲವಾರು ಸ್ಪರ್ಧೆ ಏರ್ಪಡಿಸಲಾಗಿತ್ತು.