ಮಂಡ್ಯ ಲೋಕಸಭಾ ‘ಅಖಾಡ’ಕ್ಕೆ ಪ್ರಥಮ ಬಾರಿಗೆ ಮಾಜಿ ಸಿಎಂ ‘ಎಚ್ಡಿಕೆ ಪ್ರವೇಶ’
Mar 28 2024, 12:48 AM ISTರಾಜಕೀಯವಾಗಿ ಶಕ್ತಿ ತುಂಬಿರುವ ರಾಮನಗರ ಜಿಲ್ಲೆಯನ್ನು ಬಿಟ್ಟು ಬರುವ ತೊಳಲಾಟಕ್ಕೆ ಸಿಲುಕಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಕೊನೆಗೂ ಮಂಡ್ಯ ಕ್ಷೇತ್ರದಿಂದ ತಾವೇ ಕಣಕ್ಕಿಳಿಯುವ ದೃಢ ನಿರ್ಧಾರ ಮಾಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳ ಪೈಕಿ ಕೆ.ಆರ್.ಪೇಟೆ ಕ್ಷೇತ್ರದಲ್ಲಷ್ಟೇ ಜೆಡಿಎಸ್ ಅಸ್ತಿತ್ವ ಕಾಯ್ದುಕೊಂಡಿದ್ದು, ೭ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಪತ್ಯವಿದೆ. ಆದರೂ ದೃತಿಗೆಡದ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ಗೆದ್ದೇ ಗೆಲ್ಲುವೆನೆಂಬ ಉತ್ಸಾಹದಲ್ಲಿ ಇದೇ ಮೊದಲ ಬಾರಿಗೆ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.