ಲೋಕಸಭಾ ಸಮರ: ಕಾಂಗ್ರೆಸ್‌ಗೆ ಯುವನಿಧಿಯೇ ಪ್ರಮುಖ ಅಸ್ತ್ರ!
Jan 04 2024, 01:45 AM ISTಈ ಬಾರಿಯ ಸಂಸತ್ ಚುನಾವಣೆಯಲ್ಲಿ ಶತಾಯಗತಾಯ ಅಧಿಕ ಸ್ಥಾನಗಳಿಸಲು ಎಲ್ಲ ಪಕ್ಷಗಳಂತೆ ಕಾಂಗ್ರೆಸ್ ಸಹ ಹಿಂದೆಬಿದ್ದಿಲ್ಲ. ಅದರಲ್ಲೂ, ಕರ್ನಾಟಕವೇ ಇಡೀ ದೇಶದ ಕಾಂಗ್ರೆಸ್‌ಗೆ ಮಾದರಿಯಾಗಿರುವ ಸಾಧನೆ ತೋರಿದ್ದು, ರಾಜ್ಯದಲ್ಲಿ ಅತ್ಯಧಿಕ ಸ್ಥಾನಗಳ ಗಳಿಸಲು ಈಗ ಗ್ಯಾರಂಟಿ ಯೋಜನೆಗಳು ಬಹುದೊಡ್ಡ ಅಸ್ತ್ರಗಳಾಗಿ ಕಾಂಗ್ರೆಸ್ ಬಳಸಲು ಯೋಚಿಸುತ್ತಿದೆ. ಇದಕ್ಕೆ ತಕ್ಕಂತೆ ಅದ್ಧೂರಿ ಕಾರ್ಯಕ್ರಮಗಳ ಮೂಲಕ ಗ್ಯಾರಂಟಿಗಳ ಈಡೇರಿಸಿ, ಪ್ರಚಾರವನ್ನು ಪಡೆಯುತ್ತಿದೆ. ಈಗ 5ನೇ ಗ್ಯಾರಂಟಿ ಇಡೀ ಯುವಜನರ ಮತಗಳ ಸೆಳೆಯಲು ದೊಡ್ಡ ಅಸ್ತ್ರವಾಗಿದ್ದು, ಶಿವಮೊಗ್ಗದಲ್ಲಿ ಜ.12ರಂದು ಯುವನಿಧಿ ಯೋಜನೆಗೆ ಚಾಲನೆ ನೀಡಲು ಸಕಲ ಸಿದ್ಧತೆ ನಡೆದಿದೆ.