ಬೆಂಗಳೂರು ಕೆಂಪೇಗೌಡರ ಕೊಡುಗೆ ಎಂದ ಶಾಸಕ ಮಂಜು

Jun 29 2025, 01:32 AM IST
ಇಡೀ ವಿಶ್ವದಲ್ಲಿಯೇ ನಮ್ಮ ರಾಜಧಾನಿ ಬೆಂಗಳೂರಿಗೆ ಇಂಥಾ ಹೆಸರು ಸಿಕ್ಕಿರುವುದು ನಾಡಪ್ರಭು ಕೆಂಪೇಗೌಡರ ದೂರದೃಷ್ಠಿ ಕೊಡುಗೆಯಿಂದ ಎಂದು ಶಾಸಕ ಎ.ಮಂಜು ಅವರು ತಿಳಿಸಿದರು. ಇವತ್ತು ಬೆಂಗಳೂರನ್ನು ಗ್ರೀನ್ ಸಿಟಿ, ಸಿಲಿಕಾನ್ ಸಿಟಿ ಎಂದು ಕರೆಯಲಾಗುತ್ತಿದೆ. ಇಂದು ಕರ್ನಾಟಕ ರಾಜ್ಯದ ಕೀರ್ತಿ ಉನ್ನತ ಸ್ಥಾನಕ್ಕೇರಲು ಕೆಂಪೇಗೌಡರ ಕೊಡುಗೆ ಕಾರಣವಾಗಿದೆ ಎಂದರು. ದೇಶ, ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಮಹನೀಯರನ್ನು ನಿತ್ಯವೂ ಸ್ಮರಿಸುವ ಕೆಲಸ ಆಗಬೇಕಿದೆ. ನಮ್ಮ ಆದರ್ಶ ವ್ಯಕ್ತಿಗಳನ್ನು ಕೇವಲ ಪೂಜೆ, ವೇದಿಕೆ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೇ ಅವರನ್ನು ಸರ್ವಜನಾಂಗದ ಆದರ್ಶ ವ್ಯಕ್ತಿಗಳನ್ನಾಗಿ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.