ಶಾಸಕ ಸುರೇಶ್ ವಿರುದ್ಧ ಶಿವರಾಮ್ ಸುಳ್ಳು ಆರೋಪ
Nov 05 2025, 12:15 AM ISTಮಾಜಿ ಸಚಿವ ಹಾಗೂ ಪರಾಜಿತ ಅಭ್ಯರ್ಥಿ ಬಿ ಶಿವರಾಂ ತಾಲೂಕಿನಲ್ಲಿ ನಡೆದ ೧೨೭ ಕೋಟಿ ರು. ಅಭಿವೃದ್ಧಿ ಕಾಮಗಾರಿಗಳು ನನ್ನ ಪರಿಶ್ರಮದ ಫಲವಾಗಿದ್ದು, ಇದರಲ್ಲಿ ಶಾಸಕರಿಂದ ಯಾವುದೇ ಕೊಡುಗೆ ಇಲ್ಲ ಎಂದು ಆರೋಪ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ನಡುವೆ ಸಿಕ್ಕ ಅಲ್ಪಸ್ವಲ್ಪ ಅನುದಾನದಲ್ಲಿ ಎಲ್ಲಾ ಹೋಬಳಿಗಳಲ್ಲಿ ಸಣ್ಣ ಪುಟ್ಟ ಕಾಮಗಾರಿ ನಡೆಯುತ್ತಿದೆ. ಶಾಸಕರ ಪರಿಶ್ರಮ ಇಲ್ಲ ಎಂಬ ಹೇಳಿಕೆಯನ್ನು ನೀಡಿ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಅರಸೀಕೆರೆ ಮತ್ತು ಹಾಸನ ಹಾಗೂ ಬೇಲೂರಿನಲ್ಲಿ ಸ್ಪರ್ಧಿಸಿ ಪರಾಜಿತಗೊಂಡಿದ್ದು ಇನ್ನಾದರೂ ಸುಳ್ಳು ಮಾಹಿತಿ ನೀಡುವುದನ್ನು ಬಿಡಬೇಕು ಎಂದರು.