ಆರ್‌ಎಸ್ಎಸ್ ಶತಮಾನೋತ್ಸವಕ್ಕೆ ಶುಭಕೋರಿದ ಶಾಸಕ ಮಂಜು
Oct 27 2025, 12:00 AM ISTರಾಮನಾಥಪುರದ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ನೂರಾರು ಸ್ವಯಂ ಸೇವಕರು ತಾಯಿ ಭಾರತಾಂಬೆಗೆ ಪೂಜೆ ಸಲ್ಲಿಸಿ ಪಥ ಸಂಚಲನ ಅರಂಭಿಸಿದರು. ನಂತರ ರಾಮನಾಥಪುರ ದೇವಾಲಯದ ರಸ್ತೆ, ಕೆ.ಇ.ಬಿ. ರಸ್ತೆ, ಕೋಟವಾಳು ರಸ್ತೆ ಮುಂತಾದ ಕಡೆಗಳಲ್ಲಿ ಶತಮಾನೋತ್ಸವದ ಪ್ರಯುಕ್ತ ಪಥಸಂಚಲದ ಕಾರ್ಯಕ್ರಮ ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಪಟ್ಟಾಭಿರಾಮ ಪೌಢಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಅಚರಣೆ ಹಿನ್ನೆಲೆಯಲ್ಲಿ ಗಣವೇಷಧಾರಿಗಳ, ಪಥವೇಷಧಾರಿಗಳ ಪಥಸಂಚಲನ ಪಟ್ಟಣದಲ್ಲಿ ಸಂಚಲವನ್ನೇ ಸೃಷ್ಠಿಸಿತು.