ಜೆಡಿಎಸ್ ಪ್ರತಿಭಟನೆಗೆ ನೈತಿಕತೆ ಇಲ್ಲ ಶಾಸಕ ಸ್ವರೂಪ್‌ಗೆ ಪ್ರೀತಂ ಗೌಡ ಟಾಂಗ್
Oct 20 2025, 01:02 AM ISTಹಾಸನಾಂಬೆ ಉತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪದ ಮೇಲೆ ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅವರು ತೀವ್ರ ಟೀಕೆ ಮಾಡಿದ್ದಾರೆ. ಸ್ಥಳೀಯ ಶಾಸಕನಾಗಿ ಉತ್ಸವವನ್ನು ತಮ್ಮ ವೈಯಕ್ತಿಕ ಕಾರ್ಯಕ್ರಮದಂತೆ ನೋಡಿಕೊಳ್ಳಬೇಕಾದವರು ವಿದೇಶದ ಪ್ರವಾಸ ಮುಗಿಸಿ ಉತ್ಸವದ ಹಿಂದಿನ ದಿನ ಮಾತ್ರ ಹಾಜರಾದರು. ಈಗ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ಮಾಡಿದರು.