ಬೀರೂರು ಅಭಿವೃದ್ಧಿಗೆ ವಿಶೇಷ ಒತ್ತು: ಶಾಸಕ ಕೆ.ಎಸ್.ಆನಂದ್
Apr 13 2025, 02:07 AM ISTಬೀರೂರು, ಯಾವ ರಾಜಕೀಯ ಹಿನ್ನಲೆ ಇಲ್ಲದ ಬಡರೈತ ಕುಟುಂಬದ ಮಗನನ್ನು ಚುನಾವಣೆಯಲ್ಲಿ ಅತಿಹೆಚ್ಚು ಮತನೀಡುವ ಮೂಲಕ ಗೆಲ್ಲಿಸಿದ ಬೀರೂರಿನ ಜನತೆ ಬಗ್ಗೆ ವಿಶೇಷ ಕಾಳಜಿ ಇದ್ದು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವ ಜೊತೆ ಬೀರೂರಿನ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.