ಹಾಸನಾಂಬೆಯ ದರ್ಶನ ಪಡೆದ ಶಾಸಕ ಅರವಿಂದ್ ಬೆಲ್ಲದ್
Oct 12 2025, 01:00 AM ISTಶಾಸಕ ಅರವಿಂದ್ ಬೆಲ್ಲದ್ ಅವರು ಶನಿವಾರ ತಮ್ಮ ಕುಟುಂಬ ಸಮೇತರಾಗಿ ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದರು. ದರ್ಶನದ ಬಳಿಕ ಮಾತನಾಡಿದ ಅವರು, ಹಾಸನಾಂಬೆಯ ಜಾತ್ರಾ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಾರಿ ಜಿಲ್ಲಾಡಳಿತ ವಿವೇಕದಿಂದ ಕಾರ್ಯನಿರ್ವಹಿಸಿ, ವಿವಿಐಪಿಗಳಿಗೆ ಸರ್ಕಾರಿ ವಾಹನ ವ್ಯವಸ್ಥೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು. ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನ ಪಡೆದು ನಾವು ಪುನೀತರಾಗಿದ್ದೇವೆ ಎಂದು ಅವರು ಭಕ್ತಿಭಾವದಿಂದ ಹೇಳಿದರು.