ಜಾಮರ್ ವಿರೋಧಿಸಿ ಜೈಲ್ಭರೋ: ಶಾಸಕ ವೇದವ್ಯಾಸ್ ಕಾಮತ್ ಸಹಿತ ಹಲವರು ವಶಕ್ಕೆ
Apr 06 2025, 01:52 AM ISTಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಜಾಮರ್ ಅಳವಡಿಕೆಯಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ತಲೆದೋರಿರುವುದನ್ನು ವಿರೋಧಿಸಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಶನಿವಾರ ಜೈಲು ಆವರಣ ಎದುರು ಪ್ರತಿಭಟನೆ ನಡೆಯಿತು. ಈ ವೇಳೆ ಜೈಲಿನ ಒಳಗೆ ತೆರಳಿ ಜಾಮರ್ ಕಿತ್ತೆಸೆಯುವುದಾಗಿ ಘೋಷಿಸಿ ಜೈಲ್ಭರೋಗೆ ಯತ್ನಿಸಿದ ಶಾಸಕ ವೇದವ್ಯಾಸ್ ಕಾಮತ್ ಮತ್ತಿತರರನ್ನು ಪೊಲೀಸರು ಆರಂಭದಲ್ಲೇ ತಡೆದು, ವಶಕ್ಕೆ ಪಡೆದುಕೊಂಡರು.