ಕುಲದಲ್ಲಿ ಕೀಳ್ಯಾವುದೋ ಸಿನಿಮಾಕ್ಕೆ ಶಾಸಕ ಬಾಲಕೃಷ್ಣ ಪ್ರಮೋಷನ್
Apr 02 2025, 01:01 AM ISTಕುಲದಲ್ಲಿ ಕೀಳ್ಯಾವುದೋ ಚಲನಚಿತ್ರ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದರು. ಪರಭಾಷಾ ಸಿನಿಮಾಗಳಂತೆ ಕನ್ನಡ ಸಿನಿಮಾಗಳನ್ನು ಜನ ನೋಡಿ ಆನಂದಿಸುತ್ತಿದ್ದಾರೆ. ಹಾಸನ ಜಿಲ್ಲೆ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ. ಈ ಚಿತ್ರದ ಹಾಡುಗಳು ಸಕಲೇಶಪುರ ಹಾಗೂ ರಾಮನಗರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಚಿತ್ರೀಕರಣಗೊಂಡಿದೆ. ರಾಮಾಚಾರಿ ಧಾರವಾಹಿಯ ಖ್ಯಾತಿಯ ನಟಿ ಮೌನ ಗುಡ್ಡೆ ಮನೆ ಈ ಚಿತ್ರದ ನಾಯಕಿ. ಈ ಚಿತ್ರಕ್ಕೆ ಕಥೆ ಸಾಹಿತ್ಯ ಯೋಗರಾಜ್ ಭಟ್, ನಿರ್ದೇಶನ ರಾಮನಾರಾಯಣ, ದೊಡ್ಡ ತಾರಾ ಬಳಗ ಹೊಂದಿದೆ. ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.