ಅಪೂರ್ಣ ಕುವೆಂಪು ಭವನ ಪೂರ್ಣಗೊಳಿಸಲು ಶಾಸಕ ಮಂಜು ಮನವಿ

Sep 11 2025, 12:03 AM IST
ವಿಜಯ ಸಿದ್ಧ ಶಿವದೇವ ಮಂಗಳ ಮಂದಿರದಲ್ಲಿ ನಡೆದ 132ನೇ ಗುರುತೋರಿದ ದಾರಿ -ತಿಂಗಳಮಾಮನ ತೇರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಒಕ್ಕಲಿಗ ಸಮಾಜದ ಕುವೆಂಪು ಭವನ ಕಾಮಗಾರಿ ನೆನಗುದಿಗೆ ಬಿದ್ದಿದೆ. ನನ್ನ ಅವಧಿಯಲ್ಲಿ ಲಕ್ಷಾಂತರ ರು. ಹಣವನ್ನು ಭವನಕ್ಕೆ ಕಲ್ಪಿಸಲಾಗಿದೆ. ಇನ್ನು ಸಾಕಷ್ಟು ಹಣದ ಅವಶ್ಯಕತೆ ಇದೆ. ನಾನು ಸೇರಿದಂತೆ ಇಡೀ ಸಮಾಜ ಭವನದ ಅಭಿವೃದ್ಧಿಗೆ ಕೈಜೋಡಿಸಲಿದೆ. ಮಠದ ಸುಪರ್ತಿಗೆ ನೀಡಲಾಗಿದ್ದು, ಉಳಿಕೆ ಕೆಲಸವನ್ನು ಕೂಡಲೇ ಪೂರ್ಣಗೊಳಿಸಿ ಮುಂದಿನ ಎಲ್ಲಾ ಸಮಾಜದ ಕಾರ್ಯಕ್ರಮಗಳು ನೂತನ ಭವನದಲ್ಲಿ ಆಗಬೇಕಿದೆ. ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.