ತಾಂಡಾ ನಿವಾಸಿಗಳು ಅಭಿವೃದ್ಧಿ ಮಾಡಿದವರ ಪರ ನಿಲ್ಲಿ: ಶಾಸಕ ಜೆ.ಟಿ. ಪಾಟೀಲ
Jun 27 2025, 12:53 AM ISTತಾಂಡಾಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆ ಹಾಕಿಕೊಳ್ಳಲಾಗಿದ್ದು, ತಾಂಡಾ ವಾಸಿಗಳು ಸಹ ಯಾರು ತಮ್ಮ ಅಭಿವೃದ್ಧಿ ಮಾಡಿದ್ದಾರೆ ಅಂತವರ ಪರವಿರಬೇಕು. ಕಾಂಗ್ರೆಸ್ ಸರ್ಕಾರ ತಾಂಡಾಗಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿಗೊಳಿಸಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕರಾದ ಜೆ.ಟಿ. ಪಾಟೀಲ ಮನವಿ ಮಾಡಿದರು. ತಾಲೂಕಿನ ಸುನಗ ಗ್ರಾಮದಲ್ಲಿ ಕಂದಾಯ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಸುನಗ ಎಲ್.ಟಿ 1,ಎಲ್.ಟಿ. 2, ಕುಂದರಗಿ ಎಲ್.ಟಿ ಗ್ರಾಮಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.