ಕನ್ನಡ ಭಾಷೆಗೆ ತಾಯಿ ಸ್ಥಾನ ಇರಲಿ ಎಂದ ಸಂಸದ ಶ್ರೇಯಸ್
Nov 23 2024, 12:30 AM ISTನಮ್ಮ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನ. ಎಲ್ಲಾ ಭಾಷೆಗಳ ಬಗ್ಗೆ ಅಭಿಮಾನ ಇರಲಿ, ಆದರೆ ಕನ್ನಡ ಭಾಷೆಗೆ ತಾಯಿ ಸ್ಥಾನ ಇರಲಿ. ದೇಶ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಇಂದಿನ ದಿನದಲ್ಲಿ ನಮ್ಮ ನಾಡಿನ ಸಂಸ್ಕೃತಿ ಮಾಯವಾಗುತ್ತಿದೆ ಎಂದರು. ನಾಲ್ಕು ದಿನಗಳು ನಡೆಯುತ್ತಿರುವ ರಾಜ್ಯೋತ್ಸವ ಕಾರ್ಯಕ್ರಮಗಳು ಅವಿಸ್ಮರಣೀಯ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಪುನೀತ್ ರಾಜಕುಮಾರ್ ವೇದಿಕೆಯಲ್ಲಿ ಜಿ ಕನ್ನಡ ಸರಿಗಮಪ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.