ಪುಲಕೇಶಿ, ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಕ್ರಮ ಕೈಗೊಳ್ಳಿ: ಸಂಸದ ಗದ್ದಿಗೌಡರ
Jan 25 2024, 02:03 AM ISTಬಾಗಲಕೋಟೆ: ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ಬುಧವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಪಿ.ಸಿ. ಗದ್ದಿಗೌಡರ, ಐತಿಹಾಸಿಕ ಬಾದಾಮಿ ನಗರವನ್ನು ಅಂದಗೊಳಿಸಲು ಹಾಗೂ ಗತವೈಭವ ಮರುಕಳುಹಿಸುವ ಕಾರ್ಯವಾಗಬೇಕಿದ್ದು, ಈ ದಿಶೆಯಲ್ಲಿ ಚಾಲುಕ್ಯರ ಪ್ರಸಿದ್ಧ ರಾಜ ಇಮ್ಮಡಿ ಪುಲಕೇಶಿ ಹಾಗೂ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗಳು ನಿರ್ಮಾಣಗೊಂಡಿವೆ. ಶೀಘ್ರ ಅವುಗಳ ಪ್ರತಿಷ್ಠಾಪನೆಗೆ ಸ್ಥಳ ಗುರುತಿಸುವ ಕಾರ್ಯವಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.