ಸರ್ಕಾರ ಮೇಯರ್ ಕಾಲಾವಧಿ ಹೆಚ್ಚಿಸಲಿ
Jun 29 2025, 01:33 AM ISTನನಗೆ ಸಿಕ್ಕ ಒಂದು ವರ್ಷದಲ್ಲಿ ಜನರಿಗೆ ಹತ್ತಿರವಾದ ಕೆಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ. ಪೋನ್- ಇನ್‌ಗೆ ಬಂದ ಸಮಸ್ಯೆಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿಯೇ ಬಗೆಹರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಸರ್ಕಾರ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಸರ್ಕಾರಕ್ಕೆ ಬರೆದು ತಿಳಿಸಲಾಗಿದೆ. ಒಂದು ವರ್ಷದ ಮೇಯರ್ ಅವಧಿಯಲ್ಲಿ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಅಸಾಧ್ಯ, ಆದಾಗ್ಯೂ ಉತ್ತಮ ಕೆಲಸಗಳನ್ನು ಮಾಡಿದ ಸಂತೃಪ್ತಿಯಿದೆ.