ನಿರ್ಮಲಾ ಅವರು ''ಕರ್ನಾಟಕ ದಿವಾಳಿಯಾಗಿದೆ'' ಎಂದು ಸುಳ್ಳು ಹೇಳುವ ಮೊದಲು ಕೇಂದ್ರ ಸರ್ಕಾರ ಎಷ್ಟು ಲಕ್ಷ ಕೋಟಿ ಸಾಲ ಮಾಡಿದೆ ಎಂಬುದನ್ನು ಅರಿಯಲಿ. ಇದಕ್ಕೂ ಮುನ್ನ ಬಜೆಟ್ನಲ್ಲಿ ರಾಜ್ಯಕ್ಕೆ ನೀಡಿರುವ ಕೊಡುಗೆಯ ಪಟ್ಟಿ ಕೊಡಲಿ ಎಂದು ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು ತಿರುಗೇಟು ನೀಡಿದ್ದಾರೆ.
ವಿವಿ ಸಾಗರದ ಜಲಾಶಯದ ಅಚ್ಚುಕಟ್ಟು ರೈತ ಹಿತ ಕಾಪಾಡಲು ರಾಜ್ಯ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದೆ. 3ನೇ ಬಾರಿ ಕೋಡಿ ಬಿದ್ದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ 1,274 ಕೋಟಿ ರು.ವೆಚ್ಚದ ಆಧುನೀಕರಣ ಯೋಜನೆ ಕೈಗೆತ್ತಿಕೊಂಡು ಅಚ್ಚುಕಟ್ಟುದಾರ ಹಿತ ಕಾಯುವುದಾಗಿ ಭರವಸೆ ನೀಡಿದ್ದಾರೆ.