ಶರಣರು ಎಂದರೆ ಜಾತಿ, ವರ್ಗ ಇಲ್ಲದವರು: ಸಿಎಂ ಸಿದ್ದರಾಮಯ್ಯ
Jan 14 2024, 01:32 AM ISTಬಾಗಲಕೋಟೆ: ಬಸವಾದಿ ಶರಣರ ಆಶಯದಂತೆ ಜಾತಿ ರಹಿತ ಸಮಾಜ ನಿರ್ಮಾಣ ಶರಣರಿಂದ ಮಾತ್ರ ಸಾಧ್ಯ. ಶರಣ ಎಂದರೆ ಜಾತಿ, ವರ್ಗ ಇಲ್ಲದ್ದು. ಶರಣ ಮೇಳ ಎಂದರೆ ಜಾತಿಯಿಂದ ಮುಕ್ತರಾದ ಮನುಷ್ಯರ ಮೇಳ ಎಂದು ಸಿ.ಎಂ. ಸಿದ್ದರಾಮಯ್ಯ ಹೇಳಿದರು. ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಕೂಡಲಸಂಗಮದಲ್ಲಿ ಆಯೋಜಿಸಿದ್ದ 37ನೇ ಶರಣ ಮೇಳ ಉದ್ಘಾಟಿಸಿ ಮಾತನಾಡಿದರು. ಬಸವಾದಿ ಶರಣರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದರು. ಪಟ್ಟಭದ್ರ ಹಿತಾಸಕ್ತಿಗಳು ಚಲನೆ ರಹಿತ ಜಾತಿ ವ್ಯವಸ್ಥೆ ರೂಪಿಸಿದ್ದರು. ಇದನ್ನು ವಿರೋಧಿಸಿದ ಬಸವಣ್ಣನವರು ಜಾತಿ, ಆಚರಣೆಗಳು ದೇವರು ಮಾಡಿದ್ದಲ್ಲ ಎಂದು ಸಾರಿದರು.