ಆಳ್ವಾಸ್ ಎಂಜಿನಿಯರಿಂಗ್, ತಂತ್ರಜ್ಞಾನ ಕಾಲೇಜಿನಲ್ಲಿ ಸೈಬರ್ ತರಬೇತಿ
Feb 20 2024, 01:47 AM ISTಮೂಡುಬಿದಿರೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ‘ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್ (ಸಿಎಸ್‌ಎಫ್‌ಎಸ್)’ ತರಬೇತಿ ಉದ್ಘಾಟನೆಯಾಗಿದೆ. ಕರ್ನಾಟಕದ ೧೫ ಎಂಜಿನಿಯರಿಂಗ್ ಕಾಲೇಜುಗಳಿಂದ ಆಯ್ದ ೫೦ ಜನ ವಿದ್ಯಾರ್ಥಿಗಳು ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದು, ಸೈಬರ್ ಸೆಕ್ಯುರಿಟಿಗೆ ಸಂಬಂಧಿ ೨೦೦ ಗಂಟೆಗಳ ತರಬೇತಿ ಪಡೆಯಲಿದ್ದಾರೆ.