ಹುಲಿ ಹೆಜ್ಜೆ ಗುರುತು ಪತ್ತೆ
Aug 21 2024, 12:34 AM ISTಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಶಿರಗುರ ವ್ಯಾಪ್ತಿಗೆ ಸೇರಿದ ಅರಣ್ಯ ಪ್ರದೇಶದ ಸುತ್ತ ಮುತ್ತಲಿನಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು ಸ್ಥಳೀಯರು, ವಾಹನ ಸವಾರರು, ಕೃಷಿಕರು ಭಯಭೀತರಾಗಿದ್ದಾರೆ. ಕಾನನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹೂಡಿರಬಹುದು ಎಂದು ಅರಣ್ಯ ಇಲಾಖೆಯವರು ಶಂಕಿಸಿ ಹುಲಿಯ ಚಲನ ವಲನಗಳ ಬಗ್ಗೆ ಶೋಧನೆ ನಡೆಸುತ್ತಿದ್ದು ಮುಂದಿನ ಅಗತ್ಯ ಕ್ರಮಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಾಡಾನೆಗಳ ಉಪಟಳದಿಂದ ಹೈರಣರಾಗಿದ್ದ ಮಲೆನಾಡಿಗರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಸ್ಥಳೀಯರು ಮನೆಯಿಂದ ಹೊರ ಬರಲು ಭಯ ಪಡುವಂತಾಗಿದೆ.