ಹುಲಿ ಉಗುರು ನಕಲಿ, ಅಸಲಿ ಎಂದು ನಮಗೆ ಗೊತ್ತಾಗಲ್ಲ: ಮಧು ಬಂಗಾರಪ್ಪ
Oct 27 2023, 12:30 AM ISTಇದು ಒಮ್ಮೆಲೆ ವಿಷಯ ಬಂದು ಬಿಟ್ಟಿದೆ. ಹುಲಿಯುಗುರು ಶೋಕಿಗಾಗಿ ಕೆಲವರು ಹಾಕಿಕೊಳ್ಳುತ್ತಾರೆ. ಸದ್ಯ ನಾನು ಈವರೆಗೂ ಹಾಕಿಕೊಂಡಿಲ್ಲ. ಅದು ಒರಿಜಿನಲ್ಲಾ, ಡೂಪ್ಲಿಕೇಟಾ ಎಂಬುದು ನಮಗೆ ಗೊತ್ತಾಗಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿಕಾರಿಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಕಾನೂನಿನ ಪರಿಜ್ಞಾನ ಎಲ್ಲರೂ ಇಟ್ಟುಕೊಳ್ಳಬೇಕು. ಜನಪ್ರತಿನಿಧಿಗಳಾದವರು ಸ್ವಲ್ಪ ಹುಷಾರಿಗಿರಬೇಕು. ದೊಡ್ಡ ಮನುಷ್ಯರಾಗರಲೀ, ಚಿಕ್ಕವರಾಗಿರಲೀ ನಾವು ಸ್ವಲ್ಪ ಹುಷಾರಾಗಿರಬೇಕು. ಕಾನೂನು ಎಲ್ಲರಿಗೂ ಒಂದೇ ಎಂದರು.