ಫೆ.15ರವರೆಗೆ ಉಚಿತ ಆರೋಗ್ಯ ಸೇವೆ: ಮಾಜಿ ಸಚಿವ ಎಸ್. ಆರ್. ಪಾಟೀಲ

Jan 27 2024, 01:16 AM IST
ಬೀಳಗಿ: ತಾಲೂಕಿನ ಬಾಡಗಂಡಿಯ ಎಸ್. ಆರ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಅವಳಿ ಜಿಲ್ಲೆಯ ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಫೆ.15 ವರೆಗೆ ಉಚಿತ ಆರೋಗ್ಯ ಸೇವೆಯನ್ನು ಮುಂದುವರೆಸಲಾಗುತ್ತದೆ ಎಂದು ಸಂಸ್ಥಾಪಕರು ಅಧ್ಯಕ್ಷರು, ಮಾಜಿ ಸಚಿವ ಎಸ್. ಆರ್. ಪಾಟೀಲ ಹೇಳಿದರು. ಎಸ್. ಆರ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.3ರಿಂದ ಆರಂಭಗೊಂಡ ಉಚಿತ ಆರೋಗ್ಯ ಸೇವೆಯು, ಗ್ರಾಮೀಣ ಭಾಗದ ಕಷ್ಟದಲ್ಲಿ ಮತ್ತು ಆರ್ಥಿಕವಾಗಿ ತೊಂದರೆ ಇದ್ದವರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿರುವುದರಿಂದ ಪ್ರತಿದಿನ 800ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿದರು.