ಮೇಲ್ಸೇತುವೆ, ಹೆದ್ದಾರಿಯ ಕಳಪೆ ಕಾಮಗಾರಿ ಆರೋಪ:೧೮ರಂದು ವಡ್ಡಹಳ್ಳಿಯಲ್ಲಿ ರೈತ ಸಂಘದಿಂದ ಪ್ರತಿಭಟನೆ
Jan 16 2025, 12:45 AM ISTವಡ್ಡಹಳ್ಳಿ ಕಾಮಗಾರಿ ಸ್ಥಳದಲ್ಲಿ ಎಪಿಎಂಸಿ ಮಾರುಕಟ್ಟೆ ಇದ್ದು, ಪ್ರತಿದಿನ ನೂರಾರು ವಾಹನಗಳು ಮಾರುಕಟ್ಟೆಗೆ ಬರುತ್ತವೆ. ಆ ಸೂಕ್ಷ್ಮ ಸ್ಥಳದಲ್ಲಿಯೇ ಕಾಮಗಾರಿ ಅವೈಜ್ಞಾನಿಕವಾಗಿದ್ದು, ರಸ್ತೆಯನ್ನು ಡಾಂಬರೀಕರಣಗೊಳಿಸದೇ ಪ್ರತಿ ನಿತ್ಯ ಧೂಳಿನಿಂದ ಅಕ್ಕಪಕ್ಕದ ರೈತರು, ಅಂಗಡಿ ಮಾಲೀಕರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ಕಿಡಿ ಕಾರಿದರು.